PLEASE LOGIN TO KANNADANET.COM FOR REGULAR NEWS-UPDATES


      ಕ್ಯಾಂಪಸ್ ಪ್ರತಿಯೊಂದು ಹಂತದಲ್ಲಿ ಹೊಸತನದ ಹುಡುಕಾಟಲ್ಲಿ ಬ್ಯೂಸಿಯಾಗಿರುತ್ತದೆ. ತನ್ನದೇ ಕನಸಿನ ಲೋಕವೊಂದನ್ನು ಸೃಷ್ಠಿಸಲಿಕ್ಕೆ ರಹದಾರಿಯಂತಿರುವ ಇದು ಯುವ ಮನಸ್ಸುಗಳ ಮನ ಅರಳಿನಿಲ್ಲುವಂತೆ ಮಾಡಿಬಿಟ್ಟಿರುತ್ತದೆ. ಈ ಹೊಸತನದ ಶೋಧ ನಡೆಯುವುದು ಅದೇ ಯುವ ಮನಸ್ಸುಗಳಲ್ಲೇ ಹೊರತು ಬೇರೆಲ್ಲೂ ಅಲ್ಲ. ಆ ಶೋಧನೆಯಲ್ಲಿ ಕೆಲ ಯುತ್ ಜವಾನಿ ನವೀನತೆಯ ಗುಂಗನ್ನು ಹೊತ್ತುಕೊಂಡು ದುಂದುವೆಚ್ಚದ ದೊಂದುಬಿ ಬಾರಿಸಿ, ಪಾಕೆಟ್ ಮನಿಯನ್ನು ಧಾಮ್ ಧುಮ್ ಆಗಿ ಮುಗಿಸಿಬಿಟ್ಟಿರುತ್ತದೆ. 

ಸಂಕಷ್ಟದ ದಾರಿಯನ್ನು ಎದುರಿಸಿ, ಅತ್ಯುತ್ತಮ ಲೈಫ್ ಟೈಮ್ ನಮ್ಮದಾಗಿಸಿ, ಬದುಕನ್ನು ಸ್ವಚ್ಛಂದದ ಮನಸ್ಥಿತಿಯಿಂದ ಅಂದವಾಗಿಸಿಕೊಂಡು ಗೆಲುವಿನ ನಗೆಬೀರುತ್ತ ನಂತರ ಮೆರೆದಾಡುವ ಕಾಲವೊಂದಿತ್ತು. ಆದರೆ ಈಗ ಹಾಗಲ್ಲ, ಕಾಲೇಜ್ ಎಂದರೆ ಅದರದೇ ಒಂದು ಭಿನ್ನಹ ಭಂಗಿ ಇದೆ...! ಅದರದೇ ಆದ ಒಂದು ಆಂಗಲ್ ಸೃಷ್ಠಿಯಾಗಿಬಿಟ್ಟಿದೆ. ನಾನು ಹೀಗೆಯೇ ರೆಡಿಯಾಗಿ ಸಾಗಬೇಕೆಂಬ ಯುವ ಮನಸ್ಸುಗಳ ಆಸೆಯ ಸರಮಾಲೆಯೇ ತಯಾರಾಗಿ ನಿಂತು ಬಿಟ್ಟಿದೆ. 
ಹೌದು, ಪ್ರಸ್ತುತ ಹಂತದಲ್ಲಿ ಒಂದು ವಿಚಿತ್ರ ಜಗತ್ತೇ ಕ್ಯಾಂಪಸ್‌ನಲ್ಲಿ ಕಾಣಸಿಗುತ್ತಿದೆ. ಇಲ್ಲಿ ಕಷ್ಟಕ್ಕೆ, ಕಾರ್ಪಣ್ಯಗಳಿಗೆ, ನನ್ನಡೆಗೆ ಅದಿಲ್ಲ, ಇದನ್ನು ಕೊಂಡುಕೊಳ್ಳಲು ಆಗುವಿದಿಲ್ಲ. ಎಂಬ ಕಳಹೀನತೆಯ ಮಾತುಗಳೇ ದೂರವಾಗಿ ನಿಂತುಬಿಟ್ಟಿವೆ. ಒಂದು ಹೊತ್ತಿನ ಊಟಕ್ಕೂ ಇಲ್ಲದೇ ಪರದಾಟ ನಡೆಸುವ, ಕೋರ್ಸುಗಳನು ಪಾಸು ಮಾಡಲು ಪುಸ್ತಕ ತೆಗೆದುಕೊಳ್ಳದವ ಹಾಗೋ ಹೀಗೋ ಮಾಡಿ ಒಂದು ಲೋವೆರು ಜೀನ್ಸು. ಟೀಶರ್ಟು ಮತ್ತು ಹೊರಳಾಡಿಸುವ ಸೆಲಫೋನ್ ಇಟ್ಟುಕೊಂಡಿದ್ದರೆ ಮುಗೀತು...! ಅವನ ಕಷ್ಟದ ಅಳಲು ಎಂಬ ದಾರಿ ಕಿಲೋಮೀಟರ್‌ಗಳಷ್ಟು ಮುಂದೆ ಸಾಗಿ ನಿಂತು ಬಿಟ್ಟಿರುತ್ತದೆ. ಇದೊಂದು ಇಲ್ಲರೂ ಧರಿಸುವ ನಾವೆಲ್ಲರೂ ಒಂದೇ ಎಂದು ಸಾರುವ ಆಧುನಿಕ ಯುನಿಕೋಡ್... 

ಇಲ್ಲಿ ತುತ್ತಿಗೂ ಆಹಾಕಾರ ಇರುವವರು ಸೆಲ್‌ಫೋನ್ ಹೇಗೆ ಹಿಡಿದುಕೊಂಡರು ಎಂಬುದು ಪ್ರಶ್ನೆ ಅಲ್ಲ! ಅಂತಹ ಮನೋಸ್ಥಿತಿಗಳು ಗಮನಿಸುತ್ತಿರುವ ಸಂಗತಿಗಳು ಅಂತವು, ಕಾಣಬಯಸುವ ಕನಸುಗಳು ಅಂತವು, ಇಷ್ಟಪಡುವ ಸಿನೇಮಾಗಳೂ ಅಂತವುಗಳೇ. ಸಿನೇಮಾ ಕಾಸ್ಟೂಮ್‌ಗಳ ಮತ್ತೊಂದು ಛಾಯಾಪ್ರತಿ ನಮಗೆ ಕಾಣ ಸಿಗಬೇಕಿದ್ದರೆ ನಾವು ಕಾಲೇಜ್ ಕ್ಯಾಂಪಸ್ ಗಮನಿಸಿದರೆ ಸಾಕು..! ಅಲ್ಲಿ ಸಲ್ಮಾನ್‌ಖಾನ್‌ನಂತಹ ಸಿಕ್ಸ್‌ಪ್ಯಾಕ್ ಬೊಡಿ ಬಿಲ್ಡರ್‍ಸ್‌ಗಳಿರುತ್ತಾರೆ. ರಜನಿ ಸ್ಟೈಲ್‌ನಲ್ಲಿ 'ಕೋಕ್' ಪ್ಯಾಕನ್ನು ಒಡೆದು ತಂಪು ಪಾನೀಯ ಹೀರುವ ರಣಧೀರರಿರುತ್ತಾರೆ...! ಕ್ಯಾಂಪಸ್ಸಿನ ಒಂದೆಡೆಯಿಂದ ಮತ್ತೊಂದೆಡೆ ತಿರುಗಾಡಲು ಸ್ಟ್ರಂಟ್ ಮಾಸ್ಟರ್‌ಗಳನ್ನು ಮೀರಿಸುವ ಬೈಕ್ ರೈಡರ್‌ಗಳು ನಮ್ಮಲ್ಲಿ ಕಾಣಸಿಗುತ್ತಾರೆ. 


ಹಾಗೆಂದ ಮಾತ್ರಕ್ಕೆ, ಇಲ್ಲಿ ಸಹಾಯ ಹಸ್ತ ಚಾಚುವವರಿಲ್ಲ ಎಂದಲ್ಲ. ಫ್ರೆಂಡ್ಸ ಮುಕಾಬುಲಾ  ಕೇಳಿದನ್ನು ಕೊಟ್ಟು ಕುಣಿಯುವ ನೂರೆಂಟು ಕೈಗಳುಂಟು. ಆದರೆ ಆ ಮನೋಸ್ಥಿತಿಗಳು ಯಾವುದಕ್ಕೆ ಕೊಡುತ್ತವೆ ಎಂಬ ವಿಚಾರ ಮಾತ್ರ ಕೇಳಬಾರದ ಪ್ರಶ್ನೆ. ಈ ಮಾತನ್ನ ಒಮ್ಮೆ ನಿಧಾನಿಸಿ ವಿಚಾರಿಸಿಕೊಳ್ಳುವುದಾದರೆ ತಿಳಿದೀತು. ತನಗಿರುವ ಕುಂದು ಕೊರತೆ,  ತನ್ನದೇ ಶೈಲಿಯ ಆಗು ಹೋಗಿಗೆ ಶರಣಾಗಿ ಎಲ್ಲರೊಳು ಒಂದಾಗಿ ನಿಲ್ಲುವುದು ಇಂದು ಯಾರಿಗಾರೂ ಸಾಧ್ಯವಾಗದ ಮಾತು. ತನಗೇನೇ ಕಷ್ಟವಿದ್ದರೂ ತಾನೂಕೂಡ ಹೊಸಬಗೆಯ ಟ್ರೆಂಡ್‌ಗೆ ಅಪ್‌ಡೇಟ್ ಆಗಲೇ ಬೇಕು ಎನ್ನುವಂತೆ ಪ್ರತಿಯೊಬ್ಬರ ಮನ ಹಾತೊರೆಯುತ್ತಿರುತ್ತದೆ.  

ಫ್ಯಾಷನ್ ಹಂಗಾಮ ನಿನ್ನೆ ಮೊನ್ನೆಯದಲ್ಲವಲ್ಲ, ಎಲ್ಲರೊಳು ಒಂದಾಗಿ ನಾನೂ ಇದ್ದೇನೆ ಎಂದು ಬಂದು ಆಸೆ ಹುಟ್ಟಿಸಿಬಿಟ್ಟಿರುತ್ತದೆ.  ದುಡ್ಡಿದ್ದವರಿಗೆ, ಮನೆಯಲ್ಲಿ ಕೇಳಿದಷ್ಟು ಪಾಕೆಟ್‌ಮನಿ ಕೊಡುವವರಿಗೆ ಧಾಮ್ ಧೂಮ್ ಲಿವಿಂಗ್ ಸ್ಟೈಲ್ ಕೈಬೀಸಿ ಕರೆದು ಬಿಡುತ್ತದೆ. ಇದು ಕಷ್ಟವನ್ನ ದೂರು ಮಾಡಲು ಸ್ವತ: ಪಾರ್ಟೈಮ್ ಜಾಬ್ ಬೆನ್ನುಹತ್ತಿದವರನ್ನೂ ಕೈಬಿಡುವುದಿಲ್ಲ. ನಾನೂ ನೋಡಿಯೇ ತೀರಬೇಕು ಎನುವಷ್ಟು ಆಸೆಹುಟ್ಟಿಸುತ್ತದೆ.    ಕ್ಯಾಂಪಸ್‌ನ ಅಂಗಳದಲ್ಲಿಯೂ ನೂರೆಂಟು ಕನಸು ಹೊತ್ತು ಆಸೆಗಳ ಲೋಕದತ್ತ ಕನವರಿಸುತ್ತಿರುವ, ಗುರಿಯ ಪಾಳೆಯಲ್ಲಿ ನಾನು ನಿಲ್ಲಬೇಕೆಂಬ ಎಷ್ಟೋ ಹೃದಯಗಳುಂಟು. ಆ ಹೃದಯಗಳಿಗೆ ಈ ಪ್ರಪಂಚವೊಂದು ನಮಗೆ ಆ ಅವಕಾಶವಿಲ್ಲವಲ್ಲ ಎಂಬ ನೋವು ಕೊಡದಿರಲಿ. ಸಮೃದ್ಧಿ ತುಂಬಿಕೊಂಡಿರುವ ಮನಸ್ಸುಗಳಲ್ಲೂ ಸಾದಾ ಸಂತೃಪ್ತತೆಯ ಬದುಕು ನಡೆಸುವ ಕನಸು ಮೂಡಲಿ...!  

 -ಚೇತನ್ ಸೊಲಗಿ,
'ಸಮತಾ' ವಿದ್ಯಾನಗರ 
ಮುಂಡರಗಿ-೫೮೨೧೧೮
೭೨೦೪೧೬೫೫೯೧
chetansolagi@gmail.com
     

Advertisement

0 comments:

Post a Comment

 
Top