PLEASE LOGIN TO KANNADANET.COM FOR REGULAR NEWS-UPDATES

ಕೈಗನ್ನಡಿ ಪತ್ರಿಕಾ ಬಳಗ ಹಾಗೂ

ಕನ್ನಡನೆಟ್.ಕಾಂ ಇ-ದಿನಪತ್ರಿಕಾಬಳಗದ ಸಂಯೋಜನೆಯಲ್ಲಿ

" ಕುಲಾಂತರಿ ತಳಿಗಳು - ಸರಕಾರದ ನೀತಿ "

ವಿಚಾರ ಸಂಕಿರಣ ಕಾರ್ಯಕ್ರಮ

ಅಧ್ಯಕ್ಷತೆ : ಶ್ರೀ ಕರಡಿ ಸಂಗಣ್ಣ

ಜನಪ್ರಿಯ ಶಾಸಕರು,ಕೊಪ್ಪಳ

ಮುಖ್ಯ ಅತಿಥಿಗಳು ಹಾಗೂ ವಿಷಯ ಮಂಡನೆ :

ವಿ.ಗಾಯತ್ರಿ

ಸಂಪಾದಕರು "ಸಹಜ ಸಾಗುವಳಿ" ಪತ್ರಿಕೆ ಬೆಂಗಳೂರು

ಸ್ಥಳ : ತಾಲೂಕ ಪಂಚಾಯತ ಸಭಾ ಭವನ,ಕೊಪ್ಪಳ

ದಿನಾಂಕ : ೧೧-೪-೨೦೧೦ ರವಿವಾರ ಬೆಳಿಗ್ಗೆ ೧೦-೩೦ ಗಂಟೆಗೆ

ಮಾನ್ಯರೇ,

ಭಾರತದ ಕೃಷಿ ಪರಂಪರೆಗೆ ಸಾವಿರಾರು ವರ್‍ಷಗಳ ಇತಿಹಾಸವಿದೆ. ಈ ಪರಂಪರೆಯ ಮೂಲಕ ನಮ್ಮ ಜನಪದರು ಅನಕ್ಷರಸ್ಥರಾದ ರೈತಾಪಿಗಳು ಪ್ರಕೃತಿಯ ಎಲ್ಲವನ್ನೂ ಬೆರಗುಗಣ್ಣಿನಿಂದ ನೋಡುತ್ತಾ , ಎಲ್ಲಕ್ಕೂ ದೈವಿಕಲ್ಪನೆಯನ್ನು ಕೊಟ್ಟು ತಮ್ಮ ಬದುಕಿಗೆ ಒಗ್ಗಿಸಿಕೊಂಡವರು. ಪ್ರಕೃತಿಯ ಜೀವಜಲ ನೀರನ್ನು ಶಿವನ ಜಡೆಯಲ್ಲಿ ಪ್ರತಿಷ್ಠಾಪಿಸಿ ಗಂಗೆಯೆಂದು ಕರೆದರು. ಅದೇ ನೀರು ಜಡೆಯಿಂದ ಧುಮುಕಿದಾಗ ಮಳೆರಾಯ ಎಂದು ಸಂಭೋಧಿಸಿ ಪುರಷನನ್ನಾಗಿಸಿದರು. ಮಳೆ - ಇಳೆಯನ್ನು ಸೃಷ್ಟಿಸಿದಾಕ್ಷಣ ಗಂಗೆ,ತುಂಗೆ, ಕಾವೇರಿ ಎಂದು ಸ್ತ್ರೀ ರೂಪದಲ್ಲಿ ಆರಾಧಿಸಿದರು. ಪ್ರಕೃತಿಯನ್ನು ಜೀವಜಲವನ್ನು ಅರ್ಥೈಸಿಕೊಂಡು ತಮ್ಮ ಬದುಕನ್ನು ರೂಪಿಸಿಕೊಂಡ ರೈತಾಪಿ ವರ್ಗಗಳ ತಲೆಯ ಮೇಲೆ ಕುಲಾಂತರಿ ತಳಿಗಳೆಂಬ ತೂಗ ಗತ್ತಿ ನೇತಾಡುತ್ತಿದೆ. ಆ ಬಗ್ಗೆ ಮುಕ್ತವಾಗಿ ಮಾತನಾಡೋಣ ಬನ್ನಿ..

Advertisement

0 comments:

Post a Comment

 
Top